ಶ್ರೀರಸ್ತು ಶುಭಮಸ್ತು 2000 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಸೀತಾರಾಮ್ ಕಾರಂತ್ ನಿರ್ದೇಶಿಸಿದ್ದು ಎನ್ ಕೆ ಪ್ರಕಾಶ್ ಬಾಬು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ಅನು ಪ್ರಭಾಕರ್ , ನವೀನ್ ಕೃಷ್ಣ ಮತ್ತು ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಕ್ಕೆ ಕೆ. ಕಲ್ಯಾಣ್ಗೀತೆಗಳನ್ನು ಬರೆದು ಸಂಗೀತ ಸಂಯೋಜಿಸಿದ್ದಾರೆ. ಚಿತ್ರ ಬಿಡುಗಡೆಯಾದಾಗ ಸಂಮಿಶ್ರ ಪ್ರತಿಕ್ರಿಯೆ ಪಡೆಯಿತು. ನಟ ಶ್ರೀನಿವಾಸ ಮೂರ್ತಿ ಅವರು ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಎಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. == ಪಾತ್ರವರ್ಗ == ಕಾರ್ತಿಕ್ ಪಾತ್ರದಲ್ಲಿ ರಮೇಶ್ ಅರವಿಂದ್ ಸಪ್ನಾ ಪಾತ್ರದಲ್ಲಿ ಅನು ಪ್ರಭಾಕರ್ ರಾಮಚಂದ್ರನಾಗಿ ಶ್ರೀನಿವಾಸ ಮೂರ್ತಿ ಹರಿಚಂದ್ರನಾಗಿ ನವೀನ್ ಕೃಷ್ಣ ಚಿತ್ರಾ ಶೆಣೈ ಕಾರ್ತಿಕ್ ತಾಯಿಯಾಗಿ ವೈಶಾಲಿ ಕಾಸರವಳ್ಳಿ ನಾಗೇಶ ಮಯ್ಯ ಎಂ ಎನ್ ಸುರೇಶ್ ರಾಮ ಭಟ್ಟನ ಪಾತ್ರದಲ್ಲಿ ಮನದೀಪ್ ರಾಯ್ ಕೃಷ್ಣೇಗೌಡ ಕಾರ್ತಿಕ್ ಸಹೋದರಿಯಾಗಿ ವಾಣಿಶ್ರೀ ದೀಪಾ ಭಾಸ್ಕರ್ (ಬಾಲ ಕಲಾವಿದೆ) ಬಿಂಧುಶ್ರೀ (ಬಾಲ ಕಲಾವಿದೆ) == ಚಿತ್ರಸಂಗೀತ == ಚಿತ್ರದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಕೆ. ಕಲ್ಯಾಣ್ ಅವರದು . == ಉಲ್ಲೇಖಗಳು ==